ದೇವನಹಳ್ಳಿ ಬಳಿ ಕೆಂಪೇಗೌಡ ಏರ್ಪೋಟ್ ಆದ ನಂತರ ಜಮೀನುಗಳ ಬೆಲೆ ಗಗನಕ್ಕೇರಿದ್ದು ದೇವಾಲಯ ಹಾಗೂ ಸರ್ಕಾರಿ ಜಮೀನು ಕಬಳಿಸುವವರ ಸಂಖ್ಯೆ ದಿನೆದಿನೇ ಹೆಚ್ಚಾಗ್ತಿದೆ. ಈ ಮಧ್ಯೆ, ಕಬಳಿಕೆಯಾಗ್ತಿದ್ದ ಗ್ರಾಮದ ಜಮೀನನ್ನ ಗ್ರಾಮಸ್ಥರೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಭೋವಿಪಾಳ್ಯದ 120 ವರ್ಷದ ಹಳೆಯ ದೊಡ್ಡಮ್ಮ ಮಾರಮ್ಮ ದೇವಾಲಯ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಹೀಗಾಗಿ ದೇವಾಲಯದ ಒಂದು ಎಕರೆಗೂ ಅಧಿಕ ಜಮೀನು ಕೋಟಿ ಕೋಟಿ ಬೆಲೆ ಬಾಳುತ್ತೆ ಅಂತ ಕೆಲ ಭೂಗಳ್ಳರು ಜಮೀನು ಕಬಳಿಸುವ ಹುನ್ನಾರ ಮಾಡಿದ್ದರು.