ಮೋದಿ ಪ್ರಧಾನಿಯಾಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದ ರಾಮಪಾಲ್​ಗೆ ಶೂ ಕೊಟ್ಟ ಪಿಎಂ

ಹರಿಯಾಣದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೂ ನಾನು ಶೂ ಧರಿಸುವುದಿಲ್ಲ ಎಂದು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದ ಕೈತಾಲ್‌ನ ರಾಮ್‌ಪಾಲ್ ಕಶ್ಯಪ್ ಅವರನ್ನು ಭೇಟಿಯಾದರು. ಈ ವೇಳೆ ಮೋದಿಯೇ ರಾಮಪಾಲ್​ ಅವರಿಗೆ ಶೂಗಳನ್ನು ಧರಿಸುವಂತೆ ಮಾಡಿದರು. ಪ್ರಧಾನಿ ಇಂದು ಯಮುನಾ ನಗರವನ್ನು ತಲುಪಿದರು, ಅಲ್ಲಿ ಅವರು ರಾಂಪಾಲ್ ಕಶ್ಯಪ್ ಎಂಬ ವ್ಯಕ್ತಿಗೆ ಪಾದರಕ್ಷೆಗಳನ್ನು ನೀಡುವ ಮೂಲಕ ಸನ್ಮಾನಿಸಿದರು.