ಭಾರತದ ಇನ್ನಿಂಗ್ಸ್ನಲ್ಲಿ 19 ನೇ ಓವರ್ ಅನ್ನು ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಓವರ್‌ನ ನಾಲ್ಕನೇ ಎಸೆತದಲ್ಲಿ, ಗಿಲ್ ಜಾಗ ಮಾಡಿಕೊಂಡು ಎಕ್ಸ್ಟ್ರಾ ಕವರ್ ಮೇಲೆ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಅಲ್ಲಿಯೇ ನಿಂತಿದ್ದ ಫಿಲಿಪ್ಸ್ ಗಾಳಿಯಲ್ಲಿ ಎತ್ತರಕ್ಕೆ ಹಾರಿ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು.