Lok Sabha Election: ಮನೆಯಲ್ಲಿ ವಿಶೇಷ ಪೂಜೆ ನಡೆಸಿ ಹಾಡು ಹಾಡಿದ ಈಶ್ವರಪ್ಪ ಕುಟುಂಬ

ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಒಟ್ಟು 206 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ಇಂದು ಮತದಾರ ಬರೆಯಲಿದ್ದಾನೆ. ಒಟ್ಟು 2,59,52,958 ಮತದಾರರು ಇಂದು ತಮ್ಮ ತೀರ್ಪು ಬರೆಯಲಿದ್ದಾರೆ. ಮತ್ತೊಂದೆಡೆ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಮ್ಮ ಶಿವಮೊಗ್ಗ ನಗರದ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರ ಹಾಡು ಹಾಡಿತ್ತ ಈಶ್ವರಪ್ಪ ಕುಟುಂಬ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತದಾನ ಮಾಡಿದ್ದಾರೆ. ಕೆ.ಎಸ್​. ಈಶ್ವರಪ್ಪ ಅವರಿಗೆ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್, ಸೊಸೆ ಶಾಲಿನಿ, ಹೆಣ್ಣು ಮಕ್ಕಳಾದ ಜ್ಯೋತಿ, ಶಾಂತಾ ಸಾಥ್ ನೀಡಿದ್ದಾರೆ.