ಪೋಲೆಂಡ್​ನಲ್ಲಿ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ; ಮೋದಿಗೆ ರಾಖಿ ಕಟ್ಟಿದ ಅನಿವಾಸಿಗಳು

ಪ್ರಧಾನಿ ನರೇಂದ್ರ ಮೋದಿ ಅವರ ಪೋಲೆಂಡ್ ಭೇಟಿ ಭಾರತದಲ್ಲಿ ಮಾತ್ರವಲ್ಲದೆ ಪೋಲೆಂಡ್​ನಲ್ಲಿಯೂ ಸಾಕಷ್ಟು ನಿರೀಕ್ಷೆ, ಸಂಭ್ರಮ ಮೂಡಿಸಿದೆ. ಪೋಲೆಂಡ್​ನಲ್ಲಿರುವ ಅನಿವಾಸಿ ಭಾರತೀಯರು ಮೋದಿಯವರನ್ನು ನೋಡಲು ಇಂದು ಮಧ್ಯಾಹ್ನದಿಂದಲೇ ವಾರ್ಸಾದ ಹೋಟೆಲ್ ಬಳಿ ಜಮಾಯಿಸಿದ್ದರು. ಅವರೆಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು.