ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ

ನಟಿ ಐಶ್ವರ್ಯಾ ಅವರು ಇಷ್ಟು ದಿನಗಳ ಕಾಲ ಸ್ವರ್ಗದಲ್ಲಿ ಹಾಯಾಗಿ ಇದ್ದರು. ಆದರೆ ಈಗ ಅವರು ನರಕದ ಪಾಲಾಗಿದ್ದಾರೆ. ಈ ಶಿಕ್ಷೆಯಿಂದ ಅವರನ್ನು ತಪ್ಪಿಸಲು ಕ್ಯಾಪ್ಟನ್​ ಹಂಸಾ ಪ್ರಯತ್ನ ಮಾಡಿದರೂ ಕೂಡ ಅದಕ್ಕೆ ಬಿಗ್​ ಬಾಸ್​ ಅನುಮತಿ ನೀಡಲಿಲ್ಲ. ಕಡೆಗೂ ಐಶ್ವರ್ಯಾ ಅವರು ನರಕಕ್ಕೆ ಬರುವುದು ಅನಿವಾರ್ಯ ಆಯಿತು. ಇದರಿಂದಾಗಿ ಜಗದೀಶ್​ಗೆ ಸಖತ್​ ಖುಷಿ ಆಗಿದೆ.