ಪ್ರಯಾಗ್​ರಾಜ್​ಗೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ, ರೈಲು ಧ್ವಂಸ

ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಗುಂಪೊಂದು ರೈಲಿನ ಮೇಲೆ ದಾಳಿ ಮಾಡಿತು. ದಾಳಿಯ ವೇಳೆ ರೈಲು ನಿಲ್ದಾಣದಲ್ಲಿ ನಿಂತಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಾಕುಂಭದ ನಿಮಿತ್ತ ಪ್ರಯಾಗರಾಜ್‌ಗೆ ತೆರಳುವ ಪ್ರತಿ ರೈಲಿನಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿರುವುದು ಗಮನಾರ್ಹವಾಗಿದೆ.