ಬಂಡೀಪುರ-ಊಟಿ ರಸ್ತೆಯಲ್ಲಿ ಪ್ರವಾಸಿಗರು ಕಾಡಾನೆ ಮುಂದೆ ನಿಂತು ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಓರ್ವ ಪ್ರವಾಸಿಗ ಒಂಟಿ ಸಲಗದ ಮುಂದೆ ಚೇಷ್ಟೆ ನಡೆಸಿ 25 ಸಾವಿರ ರೂ. ದಂಡ ಕಟ್ಟಿದ್ದನು. ಆದರೂ, ಬಗ್ಗದ ಕೆಲ ಪ್ರವಾಸಿಗರು ದಿನ ನಿತ್ಯ ಬಂಡೀಪುರ ಊಟಿ ರಸ್ತೆಯಲ್ಲಿ ಕಾಣಿಸಿ ಕೊಳ್ಳುವ ಕಾಡಾನೆಯ ಮುಂದೆ ಪುಂಡಾಟವಾಡುತ್ತಿದ್ದಾರೆ.