ಮಾರ್ಚ್ 27ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರ ಸ್ಮಾರಕ ಉದ್ಘಾಟನೆ ಮಾಡಲಾಯಿತು. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ವಿಶೇಷ ಎಂದರೆ ಅಂಬರೀಷ್ ಸ್ಮಾರಕದ ಪಕ್ಕ ಒಂದು ಮ್ಯೂಸಿಯಂ ಸಿದ್ಧಗೊಳ್ಳಲಿದೆಯಂತೆ. ಈ ಬಗ್ಗೆ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಮಾಹಿತಿ ನೀಡಿದ್ದಾರೆ. ‘ಸ್ಮಾರಕದ ಪಕ್ಕದಲ್ಲಿ ಮ್ಯೂಸಿಯಂ ಸಿದ್ಧಗೊಳ್ಳಲಿದೆ. ಅಂಬರೀಷ್ಗೆ ಸಂಬಂಧಿಸಿದ ಒಂದಷ್ಟು ವಸ್ತುಗಳು ಅದರಲ್ಲಿ ಇರಲಿವೆ’ ಎಂದಿದ್ದಾರೆ ಅವರು.