‘ಎನ್ಎನ್ ಪ್ರೊಡಕ್ಷನ್’ ಎಂಬ ಕಂಪನಿ ಮೂಲಕ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿರುವ ನಿಶಾ ನರಸಪ್ಪ ಅವರು ಹಲವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲು ಮಾಡಲಾಗಿತ್ತು. ಒಟ್ಟು 70 ದೂರುಗಳು ಅವರ ವಿರುದ್ಧ ದಾಖಲಾಗಿದ್ದವು. ಈಗ ಜಾಮೀನು ಪಡೆದು ಹೊರಬಂದಿರುವ ನಿಶಾ ನರಸಪ್ಪ ಅವರು ಮಾಧ್ಯಮಗಳ ಎದುರಿನಲ್ಲಿ ಕೆಲವು ಅಚ್ಚರಿಯ ವಿಚಾರ ತೆರೆದಿಟ್ಟಿದ್ದಾರೆ.