ಗುಜರಾತ್‌ನ ಜಾಮ್‌ನಗರದಲ್ಲಿ ಬುಧವಾರ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನಗೊಂಡಿತ್ತು. ಈ ಕ್ಷಣಗಳನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ. ಈ ದೃಶ್ಯಾವಳಿಗಳು ಫೈಟರ್ ಜೆಟ್‌ನ ಡೈವ್ ಮತ್ತು ನಂತರ ದೂರದಿಂದ ಭಾರಿ ಸ್ಫೋಟದ ದೃಶ್ಯವನ್ನು ತೋರಿಸುತ್ತವೆ. ಈ ವೀಡಿಯೊವು ಯುದ್ಧ ವಿಮಾನ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿ ಹಾರುವುದನ್ನು ಮತ್ತು ನಂತರ ಕೆಳಗೆ ಧುಮುಕುವುದನ್ನು ನೋಡಬಹುದು. ಅದಾದ ಕೆಲವೇ ಸೆಕೆಂಡುಗಳಲ್ಲಿ ಯುದ್ಧ ವಿಮಾನ ನೆಲಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿತು.