ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಗಲಾಟೆ

ಸೂಲಿಬೆಲೆಯವರೇ ವೇದಿಕೆಯಿಂದ ಹೇಳಿದ ಹಾಗೆ ಕಾರ್ಯಕ್ರಮಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ಸಾಯಂಕಾಲ 5 ರಿಂದ 8 ಗಂಟೆಯವರೆಗೆ ಸಮಯ ತೆಗೆದುಕೊಂಡಿದ್ದರು. ಆದರೆ ಸೂಲಿಬೆಲೆ ಮಾತಾಡುವಾಗ ನಿಗದಿತ ಸಮಯ ಮೀರಿತ್ತು. ಹಾಗಾಗಿ ಭಾಷಣ ನಿಲ್ಲಿಸುವಂತೆ ಚುನಾವಣಾಧಿಕಾರಿಗಳು ಆಯೋಜರಿಗೆ ಹೇಳುತ್ತಾರೆ. ಅವರಿಂದ ಸೂಕ್ತ ಪ್ರತಿಕ್ರಿಯೆ ಬಾರದಾದಾಗ ಅಧಿಕಾರಿಯು ವೇದಿಕೆ ಹತ್ತಿ ಸೂಲಿಬೆಲೆ ಅವರಲ್ಲಿಗೆ ಹೋಗಿ ಸಮಯ ಮೀರಿದೆ ಭಾಷಣ ನಿಲ್ಲಿಸುವಂತೆ ಹೇಳುತ್ತಾರೆ.