ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ

ನಿನ್ನೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಲು ಮುಂದಾಗಿದ್ದನ್ನು ಸಚಿವ ತಿಮ್ಮಾಪುರ ಡೌನ್ ಪ್ಲೇ ಮಾಡಿದರು. ಹಿಂದೆ, ಬಿಎಸ್ ಯಡಿಯೂರಪ್ಪನವರು ಐಎಎಸ್ ಅಧಿಕಾರಿಗಳ ಮೇಲೆ ಕೈ ಮಾಡಿದ್ದು ತನಗೆ ಗೊತ್ತಿದೆ, ಈ ಮಾತನ್ನು ಬಿವೈ ವಿಜಯೇಂದ್ರ ಅಲ್ಲಗಳೆಯುತ್ತಾರಾ? ಎಂದು ಪ್ರಶ್ನಿಸಿದ ತಿಮ್ಮಾಪುರ, ಸಿಎಂ ಸಿದ್ದರಾಮಯ್ಯ ಯಾವ ಒತ್ತಡದಲ್ಲೂ ಇಲ್ಲ ಎಂದು ಹೇಳಿದರು.