ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೇಗಿತ್ತು ನೋಡಿ ಶಿವಣ್ಣ ಅವರ ಡ್ಯಾನ್ಸ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲಚಿತ್ರ ಕಪ್ನ ಮೂರನೇ ಆವೃತ್ತಿ ನಡೆಯುತ್ತಿದೆ. ಚಿತ್ರರಂಗದ ಬಹುತೇಕರು ಇದರಲ್ಲಿ ಭಾಗಿ ಆಗಿ ತಮ್ಮ ಆಟ ಪ್ರದರ್ಶಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅವರು ರಾಷ್ಟ್ರಕೂಟ ಪ್ಯಾಂತರ್ಸ್ ತಂಡದ ಮಾಲೀಕರಾಗಿದ್ದಾರೆ. ಅವರು ಈಗಾಗಲೇ ವಿಜಯನಗರ ಪೇಟ್ರಿಯಾಟ್ಸ್ ವಿರುದ್ಧ ಜಯ ಗಳಿಸಿದ್ದಾರೆ. ಮೈದಾನದಲ್ಲಿ ಅವರು ಗಣೇಶ್ ಜೊತೆ ಹೆಜ್ಜೆ ಹಾಕಿರೋ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಶಿವಣ್ಣ ಎನರ್ಜಿ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇಂದು (ಡಿಸೆಂಬರ್ 25) ರಾತ್ರಿ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ನಲ್ಲಿ ಯಾರೆಲ್ಲ ಇರುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.