ಇನೋವಾ ಹೈಕ್ರಾಸ್ ಹೊಸ ವೆರಿಯೆಂಟ್: ಭರ್ಜರಿ ಫೀಚರ್ಸ್

ಟೊಯೊಟಾ ತನ್ನ ಜನಪ್ರಿಯ ಇನೋವಾ ಹೈಕ್ರಾಸ್ ಎಂಪಿವಿ ಆವೃತ್ತಿಯಲ್ಲಿ ಹೊಸದಾಗಿ ಜಿಎಕ್ಸ್(ಒ) ವೆರಿಯೆಂಟ್ ಬಿಡುಗಡೆ ಮಾಡಿದೆ. ಹೊಸ ವೆರಿಯೆಂಟ್ ಈ ಹಿಂದಿನ ಜಿಎಕ್ಸ್ ವೆರಿಯೆಂಟ್ ಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದ್ದು, ಇದು ಸುಮಾರು ರೂ. 1 ಲಕ್ಷ ರೂ. ಹೆಚ್ಚುವರಿ ಬೆಲೆ ಹೊಂದಿದೆ. ಇದರ ಸುರಕ್ಷತಾ ಕಿಟ್ ಹೆಚ್ಚುವರಿಯಾಗಿ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್​ ಒಳಗೊಂಡಿದೆ.