ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಆರಂಭಗೊಂಡು ಮುಂದಿನ ಹತ್ತು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ, ದಸರಾ ಉದ್ಘಾಟನೆಗೂ ಕೆಲವೇ ಕ್ಷಣಗಳ ಮುನ್ನ ಮೈಸೂರಿನ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ‘ಟಿವಿ9’ ಜತೆ ಮಾತನಾಡಿ, ಮಹಿಷಾಸುರ ಮರ್ದಿನಿ ವಿಗ್ರಹದ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.