ರೈಲು ಹತ್ತುವ ಭರದಲ್ಲಿ ಬಾಗಿಲಿನಲ್ಲಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ

ಓಡಿ ಬಂದು ರೈಲು ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರು ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ರೈಲು ಹೊರಟ ಮೇಲೆ ಓಡಿ ಹೋಗಿ ಹತ್ತುವಾಗ ಉಂಟಾಗುವ ಅಪಾಯಗಳ ಕುರಿತು ಹೊಸ ಕಳವಳವನ್ನು ಸೃಷ್ಟಿ ಮಾಡಿದೆ. ವೃದ್ಧರೊಬ್ಬರು ರೈಲು ಹತ್ತಲು ಪ್ರಯತ್ನಿಸುವಾಗ ಬೀಳುವುದನ್ನು ಕಾಣಬಹುದು ಜತೆಗೆ ಮತ್ತೊಬ್ಬ ಪ್ರಯಾಣಿಕನನ್ನು ಕೂಡ ಎಳೆದು ಬೀಳಿಸಿದ್ದಾರೆ.