ನಟ ವಿನೋದ್ ರಾಜ್ ಅವರು ಇತ್ತೀಚೆಗೆ ನಟನೆಯಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಆದಾಗ್ಯೂ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇದಕ್ಕೆ ಕಾರಣವಾಗಿರೋದು ಅವರ ಸಾಮಾಜಿಕ ಸೇವೆ. ಈಗ ನೀರಿಲ್ಲದೆ ಎಲ್ಲ ಕಡೆ ಹಾಹಾಕಾರ ಶುರುವಾಗಿದೆ. ಇದರಿಂದ ಹಸುಗಳಿಗೆ ಮೇವು ಸಿಗೋದು ಕಷ್ಟ ಆಗುತ್ತಿದೆ. ಹೀಗಾಗಿ, ವಿನೋದ್ ರಾಜ್ ಅವರು ಇತ್ತೀಚೆಗೆ ರೈತರ ಹಸುಗಳಿಗೆ ಹುಲ್ಲು ನೀಡಿದ್ದರು. ಈಗ ಅವರು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ನೆಲ ಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಮಳೆ ಬರುವ ಸಂದರ್ಭದಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಇದನ್ನು ತಪ್ಪಿಸಲು ವಿನೋದ್ ರಾಜ್ ಅವರು ಸ್ವಂತ ಹಣ ಖರ್ಚು ಮಾಡಿ ರಸ್ತೆ ರಿಪೇರಿ ಕಾರ್ಯ ಮಾಡುತ್ತಿದ್ದಾರೆ.