ಒಂಭತ್ತನೇ ವಾರ, ಒಂಭತ್ತು ಮಂದಿ ನಾಮಿನೇಟ್; ಈ ವಾರ ಯಾರು ಔಟ್?

‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗಾಗಲೇ ಎರಡು ತಿಂಗಳು ಪೂರ್ಣಗೊಳಿಸಿದೆ. ಒಂಭತ್ತನೇ ವಾರ, ಒಂಭತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಮೈಕಲ್ ಅಜಯ್, ಸಂಗೀತಾ ಶೃಂಗೇರಿ, ಪವಿ ಪೂವಪ್ಪ, ಅವಿನಾಶ್ ಶೆಟ್ಟಿ, ಸಿರಿ, ತನಿಷಾ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ಸ್ನೇಹಿತ್ ಗೌಡ ಅವರ ಹೆಸರು ನಾಮಿನೇಷನ್ ಪಟ್ಟಿಯಲ್ಲಿದೆ. ಇವರ ಪೈಕಿ ಒಬ್ಬರು ಔಟ್ ಆಗಲಿದ್ದಾರೆ. ಸುದೀಪ್ ಅವರು ಈ ವಾರ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಿರಿ ಅಥವಾ ಸ್ನೇಹಿತ್ ಔಟ್ ಆಗಬಹುದು ಎಂಬುದು ಪ್ರೇಕ್ಷಕರ ಊಹೆ. ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರ ಕಾಣಲಿದೆ.