ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿರುವ ದೇವಸ್ಥಾನ ಬಹಳ ಚಿಕ್ಕದು ಮತ್ತು ಅಲ್ಲಿ ಒಂದು ಸಾವಿರ ಭಕ್ತರಿಗೂ ಜಾಗ ಸಾಕಾಗದು. ಆದರೆ, ಬೆಟ್ಟದ ಕೆಳಗೆ ವಿಶಾಲವಾದ ಜಾಗವಿದೆ. ಕರ್ನಾಟಕ ಸರ್ಕಾರ 50 ಎಕರೆ ಜಾಗವನ್ನು ನೀಡಿದರೆ ಅಲ್ಲಿ ಭವ್ಯವಾದ ಹನುಮಾನ್ ಮಂದಿರ ನಿರ್ಮಿಸಬಹುದು ಎಂದು ಅವರು ಹೇಳುತ್ತಾರೆ.