ಮಂತ್ರ ಪಠಣ, ಪಂಚಾಮೃತಾಭಿಷೇಕ, ಚಿನ್ನ- ಬೆಳ್ಳಿ ದಾರದಿಂದ ಮಾಡಿದ ಬಟ್ಟೆಗಳನ್ನು ಹಾಕುವ ಮೂಲಕ ಅಯೋಧ್ಯೆಯ ರಾಮಮಂದಿರದ ಮೊದಲ ವಾರ್ಷಿಕೋತ್ಸವದ ದಿನವಾದ ಇಂದು ರಾಮಲಲ್ಲಾವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವದಂದು ಅಯೋಧ್ಯಾ ರಾಮ ದೇವಾಲಯದಲ್ಲಿ ಮೂರು ದಿನಗಳ ಭವ್ಯ ಪ್ರತಿಷ್ಠಾ ದ್ವಾದಶಿ ಆಚರಣೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ರಾಮಲಲ್ಲಾಗೆ ಮಂತ್ರಗಳ ಪಠಣದೊಂದಿಗೆ ಪಂಚಾಮೃತದಿಂದ ಅಭಿಷೇಕ ನೆರವೇರಿಸಲಾಯಿತು. ಬಾಲ ರಾಮನನ್ನು ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.