ಟಾಯ್ಲೆಟ್ ಕಮೋಡ್ ಒಳಗಿಂದ ಹೊರಬಂದ ಉಡದ ಮರಿ!

ಟಾಯ್ಲೆಟ್ ಕಮೋಡ್‌ನ ಸೆರಾಮಿಕ್ಸ್‌ನೊಳಗೆ ಉಡ ಅಡಗಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವೈರಲ್ ವೀಡಿಯೊದಲ್ಲಿ ಸುರಕ್ಷಿತವಾಗಿ ಆ ಉಡದ ಮರಿಯನ್ನು ಹೇಗೆ ಹೊರಗೆ ತೆಗೆಯಲಾಗಿದೆ ಎಂಬುದನ್ನು ತೋರಿಸಲಾಗಿದೆ. ಉಡದ ಮರಿಯನ್ನು ತೆಗೆದಾಗ ಸಣ್ಣಪುಟ್ಟ ಗಾಯಗಳಾಗಿದ್ದು, ಬಿಗಿಯಾಗಿ ಕಟ್ಟಿದ ದಾರದಿಂದಾಗಿ ಅದರ ಬಾಲದ ಒಂದು ಭಾಗ ಕತ್ತರಿಸಲ್ಪಟ್ಟಿದೆ. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.