ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಬಂಡರಗಲ್ ಗ್ರಾಮದ ಮುತ್ತು ಕರಮುಡಿ, ಏಪ್ರಿಲ್ 1 ರಂದು ಬಂಡರಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 1 ಕ್ಕೆ 2000 ಕಿಮೀ ಪಾದಯಾತ್ರೆ ಮೂಲಕ ಬಂದು ತಲುಪಿದ್ದಾರೆ. ಆದರೆ ಗರ್ಭಗುಡಿ ದ್ವಾರದ ಮುಂದೆ ನಿಂತು ರಾಮ ದರ್ಶನಕ್ಕೆ ಅವಕಾಶ ಸಿಗದಿದ್ದಕ್ಕೆ ವಿಡಿಯೋ ಮೂಲಕ ನಿರಾಸೆ ವ್ಯಕ್ತಪಡಿಸಿದ್ದಾರೆ.