ಬಿಜೆಪಿ ಕಚೇರಿಯಲ್ಲಿ ಯದುವೀರ್ ಕೃಷ್ಣದತ್ ಒಡೆಯರ್

ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕಟ್ ಸಿಗಲಾರದು ಅನ್ನೋ ವಿಷಯ ಹತ್ತು-ಹದಿನೈದುಗಳಷ್ಟು ಮೊದಲೇ ಗೊತ್ತಾಗಿತ್ತು. ಪ್ರತಾಪ್ ಟಿಕೆಟ್ ಪಡೆಯಲು ಶತಾಯ ಗತಾಯ ಪ್ರಯತ್ನ ಮಾಡಿದ್ದು ನಿಷ್ಫಲಗೊಂಡಿತು. ಸಾಮಾಜಿಕ ಜಾಲತಾಣವೊಂದರಲ್ಲಿ ಲೈವ್ ಆಗಿ ಅವಲತ್ತುಕೊಂಡಿದ್ದು ಕೂಡ ನೆರವಿಗೆ ಬರಲಿಲ್ಲ. ಮಾಧ್ಯಮದವರೊಡನೆ ಗದ್ಗದಿತ ಸ್ವರದಲ್ಲಿ ಮಾತಾಡಿದ್ದು ವರಿಷ್ಠರು ಸಹ ಕೇಳಿಸಿಕೊಂಡಿರುತ್ತಾರೆ.