ಇತ್ತೀಚಿಗೆ ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಅವರು ಜಿಟಿ ದೇವೇಗೌಡರ ಮನೆಗೆ ಭೇಟಿ ನೀಡಿದ್ದು ಮತ್ತು ತೃತೀಯ ರಂಗ ಸ್ಥಾಪಿಸುವ ಬಗ್ಗೆ ಗೌಡರೊಂದಿಗೆ ಚರ್ಚೆ ನಡೆಸಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ದೇವೇಗೌಡರೇನಾದರೂ ಇಬ್ರಾಹಿಂ ಜೊತೆ ಕೈ ಜೋಡಿಸುತ್ತಾರಾ ಅಂತ ಕೇಳಿದ್ದಕ್ಕೆ ಅವರ ನಡುವಿನ ಏನು ಚರ್ಚೆ ನಡೆದಿದೆ ಗೊತ್ತಿಲ್ಲ, ತನ್ನ ತಂದೆ ಯಾವತ್ತೂ ಪಕ್ಷ ಬಿಡುವ ಮಾತಾಡಿಲ್ಲ ಎಂದು ಹರೀಶ್ ಹೇಳಿದರು.