ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

‘777 ಚಾರ್ಲಿ’ ಸಿನಿಮಾ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್​ ಮನೆಯಲ್ಲಿ ನಟ ಕಾರ್ತಿಕ್​ ಮಹೇಶ್​ ಜೊತೆ ಕ್ಲೋಸ್​ ಆಗಿದ್ದರು. ಆದರೆ 10ನೇ ವಾರದಲ್ಲಿ ಅವರ ನಡುವೆ ಬಿರುಕು ಮೂಡಿದೆ. ಸಂಗೀತಾ ಇಲ್ಲದೇ ಕಾರ್ತಿಕ್​ ಮಹೇಶ್​ ಇಲ್ಲ ಎಂದು ಕೆಲವರು ಆಡಿಕೊಂಡ ಮಾತನ್ನು ಸುಳ್ಳು ಮಾಡುವ ಸಲುವಾಗಿ ಕಾರ್ತಿಕ್​ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ‘ವಿನಯ್​ಗೆ ಕಾರ್ತಿಕ್​ ಬಕೆಟ್​ ಹಿಡಿಯುತ್ತಾನೆ’ ಎಂದು ಸಂಗೀತಾ ಈ ಮೊದಲು ಹೇಳಿದ್ದರು. ಅದಕ್ಕೆ ಕಾರ್ತಿಕ್​ ಕೋಪಗೊಂಡಿದ್ದಾರೆ. ಸಂಗೀತಾ ಅವರ ಪ್ರತಿಕೃತಿಗೆ ಸುತ್ತಿಗೆಯಿಂದ ಹೊಡೆಯುವ ಮೂಲಕ ಕಾರ್ತಿಕ್​ ಕೋಪ ತೀರಿಸಿಕೊಂಡಿದ್ದಾರೆ. ಇದರಿಂದ ಬಿಗ್​ ಬಾಸ್​ ಮನೆಯಲ್ಲಿ ಇರುವ ಎಲ್ಲ ಸ್ಪರ್ಧಿಗಳಿಗೆ ಶಾಕ್​ ಆಗಿದೆ. ಈ ಸಂಚಿಕೆ ಡಿಸೆಂಬರ್​ 17ರಂದು ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕವೂ ಶೋ ವೀಕ್ಷಿಸಬಹುದು.