ಮಂಡ್ಯ, ಜುಲೈ 28: ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ತುಂಬುತ್ತಿರುವ ಡ್ಯಾಂನ ಹಿನ್ನೀರಿನಲ್ಲಿ ನೀರು ನಾಯಿಗಳು ಕಂಡು ಬಂದಿದ್ದು, ಕ್ಯಾಮರಾ ಕಂಡೊಡನೆ ನೀರಿನಲ್ಲಿ ಮರೆಯಾಗಿವೆ. ಈ ಪೈಕಿ ಒಂದು ನೀರು ನಾಯಿ, ನೀರಿನಲ್ಲಿ ಮುಳಗಿ ಮತ್ತೆ ಮೇಲೆ ಬಂದು ಕ್ಯಾಮರಾ ನೋಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ.