ತಾಯಿಯೊಂದಿಗಿದ್ದ ಮರಿ ಆನೆಯನ್ನು ತಿನ್ನಲು ಹೊಂಚು ಹಾಕಿದ ಹುಲಿ ಕೊನೆಗೆ ತಾನೇ ಹೆದರಿ ಓಡಿಹೋಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗಿದ್ದ ಮರಿ ಆನೆಯನ್ನು ತಿನ್ನಲು ಹೊಂಚು ಹಾಕಿ ಕುಳಿತಿದ್ದ ಹುಲಿಯನ್ನು ತಾಯಿ ಆನೆ ಓಡಿಸಿದೆ. ಸಫಾರಿಗೆ ಬಂದಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ತಾಯಾನೆ ಹುಲಿಯನ್ನು ಓಡಿಸಿದ ದೃಶ್ಯ ಸೆರೆಯಾಗಿದೆ.