ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ್ದ ಕುನಾಲ್ ಕಮ್ರಾ

ತಮ್ಮ ಸ್ಟ್ಯಾಂಡ್​-ಅಪ್​ ಶೋವೊಂದರಲ್ಲಿ ಏಕನಾಥ್ ಶಿಂಧೆಯನ್ನು ಅಪಹಾಸ್ಯ ಮಾಡಿದ್ದ ಕುನಾಲ್ ಕಮ್ರಾ ವಿರುದ್ಧ ಸೇನಾ ಕಾರ್ಯಕರ್ತರು ಗರಂ ಆಗಿದ್ದು, ಕಾರ್ಯಕ್ರಮ ನಡೆದ ಹೋಟೆಲ್​ನ್ನು ಧ್ವಂಸಗೊಳಿಸಿದ್ದಾರೆ. ವೈರಲ್ ಆದ ವಿಡಿಯೋ ನಂತರ ಗಲಾಟೆ ತೀವ್ರಗೊಂಡು, ಶಿವಸೇನಾ ಕಾರ್ಯಕರ್ತರು ಕಾರ್ಯಕ್ರಮ ರೆಕಾರ್ಡ್ ಮಾಡಲಾದ ಮುಂಬೈನ ಹೋಟೆಲ್ ಅನ್ನು ಧ್ವಂಸಗೊಳಿಸಿದ್ದು, ಕಮ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇತ್ತೀಚೆಗೆ ನಡೆದ ನಯಾ ಭಾರತ್ ಎಂಬ ಕಾರ್ಯಕ್ರಮದಲ್ಲಿ ಸಮಕಾಲೀನ ರಾಜಕೀಯವನ್ನು ವ್ಯಾಪಕವಾಗಿ ಚರ್ಚಿಸಿದ ಕಮ್ರಾ, ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಶಿಂಧೆ ಅವರನ್ನು ಟೀಕಿಸಿದ್ದರು.