ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?

ಲಾಯರ್ ಜಗದೀಶ್ ಅವರ ವರ್ತನೆಯಿಂದ ಬೇಸತ್ತು ಬಿಗ್​ಬಾಸ್​ನಿಂದ ಎಲಿಮಿನೇಟ್ ಮಾಡಲಾಗಿದೆ. ಆದರೆ ಶನಿವಾರ ಸುದೀಪ್ ಅವರು ಜಗದೀಶ್ ಪರವಾಗಿ ಮಾತನಾಡಿದ್ದರು. ಇದೀಗ ಬಿಗ್​ಬಾಸ್​ ಹೊಸ ಪ್ರೋಮೋ ಪ್ರಕಾರ, ಬಿಗ್​ಬಾಸ್ ವೇದಿಕೆ ಮೇಲೆ ಜಗದೀಶ್​ ಅವರ ವಿಡಿಯೋ ಪ್ರಸಾರ ಮಾಡಲಾಗಿದ್ದು, ಜಗದೀಶ್ ಬಿಗ್​ಬಾಸ್​ ಕ್ಷಮೆ ಕೇಳಿರುವುದಲ್ಲದೆ, ತಮ್ಮನ್ನು ಮತ್ತೆ ಬಿಗ್​ಬಾಸ್​ಗೆ ಕರೆಸಿಕೊಳ್ಳಲು ಸಾಧ್ಯವಾ ಎಂದು ಮನವಿ ಮಾಡಿದ್ದಾರೆ.