ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಹಾಡು ಹಾಡಿ ರಂಜಿಸ್ತಾರೆ ಕಂಡಕ್ಟರ್!

ಬಸ್​​ನಲ್ಲಿ ಪ್ರಯಾಣಿಸುವಾಗ ತುಂಬಾ ಬೋರಿಂಗ್​ ಅನ್ಸುತ್ತೆ.. ಆದ್ರೆ, ಇಲ್ಲೊಂದು ಬಸ್​​ನಲ್ಲಿ ಪ್ರಯಾಣ ಮಾತ್ರ ಸಖತ್​​ ಎಂಟರ್​ಟೈನ್ಮೆಂಟ್​ ಸಿಗುತ್ತೆ.. ಚಾಮರಾಜನಗರ ಕೆಎಸ್​ಆರ್​ಟಿಸಿ ವಿಭಾಗದ ನಿರ್ವಾಹಕ ಹೇಮಪ್ಪ ತಳವಾರ್, ಬಸ್​​ನಲ್ಲಿ ಮೈಕ್ ಹಿಡಿದು ಕನ್ನಡ ಹಾಡುಗಳನ್ನ ಹಾಡಿ ಪ್ರಯಾಣಿಕರನ್ನ ರಂಜಿಸ್ತಿದ್ದಾರೆ. ಇತ್ತೀಚಿಗೆ ಹೇಮಪ್ಪ ಬಸ್​ನಲ್ಲಿ ಹಾಡಿದ ಹಾಡು ವೈರಲ್​​ ಆಗಿದೆ. ಮೂಲತಃ ಹಾವೇರಿ ಜಿಲ್ಲೆ ಗುತ್ತಲ್ ಪಟ್ಟಣ್ ನಿವಾಸಿಯಾಗಿರೋ ತಳವಾರ್, ಕಳೆದ 10 ವರ್ಷಗಳಿಂದ ಚಾಲಕ ಕಂ ನಿರ್ವಾಹಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಹಾಡು ಅಭ್ಯಾಸ ಹೊಂದಿರೋ ಹೇಮಪ್ಪ, ಕೆಲಸದ ಒತ್ತಡಗಳ ಮಧ್ಯೆ ಪ್ರಯಾಣಿಸುವ ಪ್ರಯಾಣಿಕರಿಗೆ ಮನರಂಜಿಸುವ ಸಲುವಾಗಿ ಹಾಡುಗಳನ್ನು ಹಾಡುತ್ತೇನೆ ಎಂದಿದ್ದಾರೆ.