ರೈತನಿಗೆ ಪರಿಹಾರ ನೀಡದ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ

ಮಂಡ್ಯ, ಆಗಸ್ಟ್​ 10: ರೈತರೊಬ್ಬರ ಜಮೀನಿಗೆ ಪರಿಹಾರ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ಮಾಡಿತ್ತು. ಕೋರ್ಟ್ ಆದೇಶದ ಅನ್ವಯ, ರೈತರ ಸಹಕಾರದೊಂದಿಗೆ ನಿನ್ನೆ ಬುಧವಾರ ಎಸಿ ಕಚೇರಿಗೆ ಆಗಮಿಸಿ ಎಸಿ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಯಿತು.