ಕಾಡುಮಲ್ಲೇಶ್ವರ ಗೆಳಯರ ಬಳಗ ಮುಜಾರಾಯಿ ಇಲಾಖೆ ಸಹಕಾರದಲ್ಲಿ ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗಿದೆ. ಬಸವನಗುಡಿ ಕಡಲೆ ಕಾಯಿ ಪರಿಕ್ಷೆಯಂತೆ ಇದು ಕೂಡ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. 800 ಕೆಜಿ ಕಡಲೆ ಕಾಯಿಗಳಿಂದ ಇಪ್ಪತ್ತು ಅಡಿ ಉದ್ದ ಹಾಗೂ ಇಪತ್ತು ಅಡಿ ಎತ್ತರದ ಬಸವ ಮೂರ್ತಿ ನಿರ್ಮಿಸಲಾಗಿದೆ.